Latest News

ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ
ಶ್ರೀರಾಮಕುಂಜೇಶ್ವರ ಬಡ ವಿದ್ಯಾರ್ಥಿ ದತ್ತಿನಿಧಿ(ರಿ),ಶ್ರೀರಾಮಕುಂಜೇಶ್ವರ ಕ್ರೀಡಾ ಟ್ರಸ್ಟ್(ರಿ) ರಾಮಕುಂಜ ಹಾಗೂ ಭೂಮಿ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ ಕರಾವಳಿ ಗ್ರೂಪ್ ಆಫ್ ಕಾಲೇಜ್ ಎಕ್ಸಲೆಂಟ್ ಆವಾರ್ಡ್ ಇದರ ಸಹಯೋಗದೊಂದಿಗೆ ಶ್ರೀರಾಮಕಂಜೇಶ್ವರ ಆ.ಮಾ.ಪ್ರೌ.ಶಾಲೆ ರಾಮಕುಂಜ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಸುಮಾರು ರೂ.1.50ಲಕ್ಷದಷ್ಟು(ಒಂದೂವರೆ ಲಕ್ಷದಷ್ಟು) ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಂ.13ರಂದು ಪೂರ್ವಾಹ್ನ 9.30ಕ್ಕೆ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಮಠ ಶ್ರೀಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಅತಿಥಿಗಳಾಗಿ ಇ.ಕೃಷ್ಣಮೂರ್ತಿ ಕಲ್ಲೇರಿ ಅಧ್ಯಕ್ಷರು, ಶ್ರೀ.ರಾ.ವಿ.ಸಭಾ(ರಿ)ರಾಮಕುಂಜ, ಉಪಾಧ್ಯಕ್ಷರು ಶಿಕ್ಷಕ-ರಕ್ಷಕ ಸಂಘ, ಶ್ರೀ.ರಾ.ಆಂ.ಮಾ.ಪ್ರೌ.ಶಾಲೆ ರಾಮಕುಂಜ ಪುರಂದರ.ಕೆ. ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ ಪ್ರಕಟಣೆಗೆ ತಿಳಿಸಿದ್ದಾರೆ.