Latest News

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೆಡ್ ಡೇ ಆಚರಣೆ
ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್ ನಲ್ಲಿ ಕೆಂಪು ಬಣ್ಣವನ್ನು ಪುಟಾಣಿ ವಿದ್ಯಾರ್ಥಿಗಳಿಗೆ ಪರಿಚಯಿಸಲು ಹಾಗೂ ಮಕ್ಕಳ ಮುಗ್ಧ ಮನದಲ್ಲಿ ಬಣ್ಣಗಳ ತಿಳುವಳಿಕೆ ಮನದಟ್ಟಾಗಲು ಅತಿ ಸರಳವಾಗಿ ವಿವಿಧ ಕೆಂಪು ಬಣ್ಣಗಳಿಂದ ತಯಾರಿಸಿದ ಕ್ರಾಫ್ಟ್ ಗಳು, ಬಲೂನುಗಳು, ಹಲವು ರೀತಿಯ ಆಟಿಕೆಗಳು ಹಾಗೂ ವಿವಿಧ ರೀತಿಯ ಕೆಂಪು ಬಣ್ಣದ ವಸ್ತುಗಳನ್ನು ಒಂದೇ ಕಡೆ ಜೋಡಿಸಿ,ಅಲಂಕರಿಸಿ, ಮಕ್ಕಳಿಗೂ ಕೆಂಪು ಬಣ್ಣದ ಧಿರಿಸು ಧರಿಸಿ ಕೆಂಪು ಬಣ್ಣದ ಗುರುತಿಸುವಿಕೆ ಗ್ರಹಿಸಲು ರೆಡ್ ಡೇ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ ಸೇಸಪ್ಪ ರೈ, ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಅಕ್ಷತಾ ಟಿ, ಶಿಕ್ಷಕಿಯರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು.