Latest News

ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜರುಗಿದ ವಿದ್ಯಾಭಾರತಿ ದ.ಕ.ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 22 ವಿದ್ಯಾರ್ಥಿಗಳು ಭಾಗವಹಿಸಿ, 12 ವಿದ್ಯಾರ್ಥಿಗಳು ಸೆ.20,21ರಂದು ಶಿವಮೊಗ್ಗದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಸಂಕಲ್ಪ.ಬಿ.ಆರ್. ಹಾಗೂ ಚೇತನ್.ಟಿ.ಎನ್ ಇವರುಗಳು ವೈಯಕ್ತಿಕ ಚಾಂಪಿಯನ್ನೊಂದಿಗೆ 14ರ ವಯೋಮಾನದ ಬಾಲಕರ ಹಾಗೂ 17ರ ವಯೋಮಾಣದ ಬಾಳಕರ ತಂಡ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿರುತ್ತಾರೆ. ದೈಹಿಕ ಶಿಕ್ಷಕರಾದ ಪ್ರೇಮ ಹಾಗೂ ವಾಸಪ್ಪ ಮಾರ್ಗದರ್ಶನ ನೀಡಿರುತ್ತಾರೆ. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ, ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಭೆ, ಆಡಳಿತಾಧಿಕಾರಿ ಆನಂದ.ಎಸ್.ಟಿ ಹಾಗೂ ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್ ಅಭಿನಂದನೆ ಸಲ್ಲಿಸಿದರು.