Latest News

ಶ್ರೀರಾ.ಆಂ.ಮಾ.ಶಾಲೆಯ ವಿದ್ಯಾರ್ಥಿ ಸಂಕಲ್ಪ.ಬಿ.ಆರ್. ರಾಜ್ಯ ಮಟ್ಟಕ್ಕೆ ಆಯ್ಕೆ
ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ಬಿ.ಜಿ.ಎಸ್. ವಿದ್ಯಾ ಸಂಸ್ಥೆ ಆಯೋಜಿಸಿದ ದ.ಕ.ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಕಲ್ಪ.ಬಿ.ಆರ್(10ನೇ) ಕೋಲು ಜಿಗಿತ(ಪೋಲ್ ವಾಲ್ಟ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ನ.11,12,13 ರಂದು ಆದಿಚುಂಚನಗಿರಿ ವಿದ್ಯಾಸಂಸ್ಥೆ ಮಂಡ್ಯ ಇಲ್ಲಿ ಜರಗುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ. ದೈಹಿಕ ಶಿಕ್ಷಕರಾದ ಪ್ರೇಮ ಹಾಗೂ ವಾಸಪ್ಪ ತರಬೇತಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ , ಆಡಳಿತಾಧಿಕಾರಿ ಆನಂದ.ಎಸ್.ಟಿ, ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್, ಶೈಕ್ಷಣಿಕ ಸಲಹೆಗಾರ ರವೀಂದ್ರ ಶೆಟ್ಟಿ ದರ್ಬೆ ಹಾಗೂ ಶಿಕ್ಷಕರು ಮಾರ್ಗದರ್ಶನ ನೀಡಿದರು.