Contact : +91 9663 755 105 / sremramakunja@gmail.com

ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ

ಮುದ್ದುಕೃಷ್ಣ, ಬಾಲಗೋಪಾಲ, ತುಂಟಕೃಷ್ಣ ಹಾಗೂ ರಾಧೆ ರುಕ್ಮಿಣಿಯರ ವೇಷಧಾರಿ ಹಾಕುವ ಮೂಲಕ ಶ್ರೀರಾಮಕುಂಜೇಶ್ವರ ಕಿಂಡರ್ ಗಾರ್ಟನ್‍ನ ಪುಟಾಣಿಗಳು ಶ್ರೀ ಕೃಷ್ಣಜನ್ಮಾಷ್ಠಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.

ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಶ್ರೀಕೃಷ್ಣ ವೇಷಧಾರಿ ಪುಟಾಣಿಗಳಿಗೆ ಶ್ರೀಕೃಷ್ಣ ಲೀಲೆಗಳ ಕುರಿತು ಹಿತವಚನ ನೀಡಿದರು. ಶಿಕ್ಷಕಿ ಲತಾ ಪುಟಾಣಿಗಳಿಗೆ ಶ್ರೀಕೃಷ್ಣ ಭಜನೆಯನ್ನು ಹಾಡಿಸಿದರು. ನಂತರ ಕೃಷ್ಣ, ರಾಧಾ ವೇಷಧಾರಿ ಮಕ್ಕಳು ಮಡಿಕೆ ಒಡೆಯುವ ಮೂಲಕ ವಿವಿಧ ಸ್ಫರ್ಧೆಗಳಿಗೆ ಚಾಲನೆ ನೀಡಿದರು. ನಂತರ ಭಾಗವಹಿಸಿದ ಎಲ್ಲ ಪುಟಾಣಿಗಳಿಗೆ ಪ್ರೊತ್ಸಾಹಕ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಲೋಹಿತಾ, ಆಡಳಿತಾಧಿಕಾರಿ ಎಸ್.ಟಿ.ಆನಂದ್, ಶಿಕ್ಷಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ, ಪೋಷಕರು ಮೊದಲಾದವರು ಉಪಸ್ಥಿತರಿದ್ದರು.