Contact : +91 9663 755 105 / sremramakunja@gmail.com

ಸಂಗೀತ ಶಾಲೆ ಉದ್ಘಾಟನೆ

ಶ್ರೀರಾಮಕುಂಜೇಶ್ವರ ಕಿಂಡರ್ ಗಾರ್ಟನ್‍ನಲ್ಲಿ ವಿದ್ವಾತ್ ಶ್ಯಾಮಲ ನಾಗರಾಜ್ ಅವರು ಶ್ರೀರಾಮಕುಂಜೇಶ್ವರ ಸಂಗೀತ ಶಾಲೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದವರು ಸಂಗೀತ ಕಲಿಕೆಯಿಂದ ಏಕಾಗ್ರತೆ ಹೆಚ್ಚಾಗುತ್ತದೆ. ವಿದ್ಯಾಭ್ಯಾಸಕ್ಕೆ ತೊಂದರೆಯಾಗವುದು ಎನ್ನುವುದು ಪೋಷಕರ ತಪ್ಪು ಕಲ್ಪನೆಯಾಗಿದೆ. ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಶಿಕ್ಷಣದಲ್ಲಿ ಉತ್ತಮ ಅಂಕ ಗಳಿಸಿದ್ದಾರೆ ಎಂದು ಹೇಳಿದರು.

ನಂತರ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸಂಗೀತ ಕಛೇರಿ ನಡೆಸಲಾಯಿತು. ಪ್ರತೀ ಬುಧವಾರದಂದು ಸಂಗೀತ ಕಛೇರಿ ನಡೆಯಲಿದೆ.

ಪ್ರಾಥಮಿಕ ಶಾಲೆಯ ಮುಖ್ಯ ಗುರು ಲೋಹಿತ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರೌ.ಶಾಲೆಯ ಮುಖ್ಯ ಗುರು ಗಾಯತ್ರಿ.ಯು.ಎನ್, ಆಡಳಿತಾಧಿಕಾರಿ ಆನಂದ್.ಎಸ್.ಟಿ ಸಹಶಿಕ್ಷಕರು ಹಾಗೂ ಸಂಸ್ಥೆಯ ಸಿಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.